Posts

ಮೇ ತಿಂಗಳು 1ನೇ ತಾರೀಖು, ಸೂರ್ಯೋದಯ

Image
              ಮೇ ತಿಂಗಳು 1ನೇ ತಾರೀಖು ನನ್ನ ಜೀವನದಲ್ಲಿ ಮರೆಯಲಾಗದ ದಿನ. ಜ್ವರ ಬರುತ್ತಿರುವ ನನ್ನ ತಾಯಿಯನ್ನು ನೋಡಲು ಮನಸ್ಸಾಗಿ, ಏಪ್ರಿಲ್ 30, 2015 ಸಂಜೆ  ಮಂಗಳೂರಿನಿಂದ ಅನಂತಪುರಕ್ಕೆ  ಹೊರಟೆ.  ನಾನು ಮಗತನಿದ್ದೆಯಲ್ಲಿದ್ದೆ. ಹಠಾತ್ತನೆ, ನನ್ನ ತಾಯಿ ನನ್ನ ಕೆನ್ನೆಯನ್ನು ತನ್ನ ಕೈಯಲ್ಲಿ ಸವರಿ ವೆಂಕಟೂ ಎಂದು ಕರೆದಹಾಗೆ ಅನಿಸಿತು. ಎಚ್ಚರವಾಗಿ ನೋಡಿದರೆ ಮೇ 1,2015 ಬೆಳಿಗ್ಗೆ 6-30 ಘಂಟೆ ಸಮಯವಾಗಿತ್ತು.ಬಸ್ಸು ಬಳ್ಳಾರಿ ಹೊರವಲಯದಲ್ಲಿ ಬರುತ್ತಿತ್ತು. 7ಘಂಟೆಗೆ ಬಸ್ಸು ಬಳ್ಳಾರಿ ನಿಲ್ದಾಣ ಸೇರುತ್ತಿತ್ತು, ನನ್ನ ಕೊನೆಯ ತಮ್ಮನಿಂದ ಫೋನ್ ಬಂತು. ಎಲ್ಲಿದ್ದೀಯ ಅಣ್ಣಾ ಎಂದು. ಅಮ್ಮನ ನೋಡುವ ಮನಸ್ಸಾಯಿತು, ಊರಿಗೆ ಬರುತ್ತಿದ್ದೇನೆ ಎಂದು ಹೇಳಿದೆ. ಅಮ್ಮ ಈಗಷ್ಟೇ 6-30 ಘಂಟೆಗೆ ಮರಣ ಹೊಂದಿದ್ದಾಳೆ ಎಂದು ತಮ್ಮ ಹೇಳಿದ. ಅಂದರೆ, ನನ್ನ ತಾಯಿ ಇಹಲೋಕ ತ್ಯಜಿಸುವ ವೇಳೆಯಲ್ಲಿ ಸಹಾ, ನನ್ನ ಮಾತಾಡಿಸಿ, ಕೈ ಯಿಂದ ಕೆನ್ನೆ ಸವರಿ ಹೋಗಿದ್ದಾರೆ😢😢

ಮಾವಿನ ಉಪ್ಪಿನಕಾಯಿ ತಯಾರಿಸುವ ವಿಧಾನ

Image
  ಮಾವಿನ ಕಾಯಿ.  - 15 ಸಾಸಿವೆ            -200 ಗ್ರಾಂ ಮೆಂತ್ಯ.           - 3 ಸ್ಪೂನ್ ಉಪ್ಪು.           -200 ಗ್ರಾಂ ಮೆಣಸಿನ ಪುಡಿ-200 ಗ್ರಾಂ ಎಳ್ಳೆಣ್ಣೆ.          1 ಲೀಟರ್ ಮೊದಲು, ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು, ಒಣ ಬಟ್ಟೆಯಿಂದ ಒರೆಸಿ, ಹೋಳು ಮಾಡಿಕೊಳ್ಳಬೇಕು.  ಸಾಸಿವೆ ಮತ್ತು ಮೆಂತ್ಯನ್ನು ಬಾಣಲೆಯಲ್ಲಿ (ಎಣ್ಣೆ ರಹಿತ) ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.  ಮಾವಿನ ಕಾಯಿ ಹೋಳನ್ನು ಪಾತ್ರೆಯಲ್ಲಿ ಹಾಕಿ, ಸಾಸಿವೆ ಮೆಂತ್ಯ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಎಳ್ಳೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದಕ್ಕೆ ನೀರು ತಗಿಲಸಬಾರದು. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಚೆನ್ನಾಗಿ ಕಲಿಸುತ್ತಾ, ಎರಡು ದಿನ ಅದೇ ಪಾತ್ರೆಯಲ್ಲಿ ಇಟ್ಟು, ರುಚಿ ನೋಡಿದಾಗ, ಏನಾದರೂ ಕಡಿಮೆ ಅನಿಸಿದರೆ, ಸೇರಿಸಿ,  ರುಚಿಯನ್ನು ಸರಿಪಡಿಸಿ, ಉಪ್ಪಿನಕಾಯಿಯನ್ನು ಬೇರೆ ಗಾಜಿನ ಬಾಟಲಿಯಲ್ಲಿ ಅಥವಾ, ಜಾಡಿಯಲ್ಲಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಇದು ನೀರಿನ ಸಂಪರ್ಕಕ್ಕೆ ಬರಬಾರದು. ಉಪ್ಪಿನಕಾಯಿ ವರ್ಷಪೂರ್ತಿ ಕೆಡುವುದಿಲ್ಲ.   

How to prepare Sandwich

Image
Hi friends,  How are you all doing? After a long break, I'm inclined to share the recipe of Sandwich prepared by me today evening at my home. I have used Modern hi fibre brown bread.  I have prepared the curry with the following ingredients for placing in between the two bread slices. Onions - 5. Carrots - 5. Tomatoes -2. Green chillies -6. Ginger paste little. Curry leaves.  Coriander leaves. Salt - 2 tsp. Turmeric powder & Garam Masala- 1 TSP each. Chilli powder - 1 TSP. Coconut oil - 3 tsp. Grated the Carrots. Chopped the onion into small pieces. Chillies and Tomatoes cut into small pieces.  Heated oil in the Pan. Added mustard, turmeric powder, onion. After little fry of the onions, added grated carrot, tomatoes and chillies. Added ginger paste, salt, chilli powder, Garam Masala. After frying the entire mixture, add curry leaves and coriander leaves. Mix well.  I have applied home made butter on the bread slices, filled the curry between the two slices. ...

ನಾನು ಕಂಡ ರವಿ ಬೆಳಗೆರೆ

Image
              ನನಗೆ ರವಿ ಬೆಳಗೆರೆ ಅವರ ಹೆಸರು ಪರಿಚಯ ಆಗಿದ್ದು, ಅವರ "ಹಾಯ್ ಬೆಂಗಳೂರು" ಪತ್ರಿಕೆ ಮೂಲಕ. ಅದರಲ್ಲೂ ನಾನು ಎಲ್ಲಿಯಾದರೂ ಪ್ರಯಾಣ ಮಾಡುವಾಗ, "ಹಾಯ್ ಬೆಂಗಳೂರು" ಪತ್ರಿಕೆ ಕೊಳ್ಳುವುದು ನನ್ನ ಮುಖ್ಯ ಹವ್ಯಾಸವಾಗಿತ್ತು. ನಂತರ ದಿನಗಳಲ್ಲಿ ಗೊತ್ತಾಯಿತು, ರವಿ ಬೆಳಗೆರೆ ಅವರು ನನ್ನ ಇಲಾಖೆಯ ಸಹೋದ್ಯೋಗಿಯ‌ ಕಜಿನ್ ಅಂತ. ನನ್ನ ಸಹೋದ್ಯೋಗಿ ನನ್ನ ದೂರದ ಸಂಬಂಧೀಕರಾಗಿರುವುದಿರಿಂದ, ರವಿ ಬೆಳಗೆರೆ ಅವರು ಸಹಾ ನನಗೆ ಸಂಬಂಧೀಕರಾಗುತ್ತಾರೆ ಅಂತ ಒಂದು ಹೆಮ್ಮೆಯ ಭಾವನೆ. ನನ್ನ ಸಹೋದ್ಯೋಗಿ ಮೂಲಕ ಒಂದೆರಡು ಬಾರಿ, ತೆಲುಗು ಭಾಷೆಯ ತುಂಬಾ ಹಳೇ ಕಾಲದ ಪುಸ್ತಕ, ರವಿ ಬೆಳಗೆರೆ ಅವರಿಗೆ ಕಳಿಸಿದ್ದು ಉಂಟು. ರವಿ ಬೆಳಗೆರೆ ಅವರು ನನ್ನನ್ನು ಅವರ ಪತ್ರಿಕಾ ಕಚೇರಿಗೆ ಕರೆತರಲು, ನನ್ನ ಸಹೋದ್ಯೋಗಿ ಮೂಲಕ ಎರಡು ಮೂರು ಬಾರಿ ಸಂದೇಶ ಕಳಿಸಿದ್ದೂ ಹೌದು.  ಕಾರಣಾಂತರಗಳಿಂದ, ರವಿ ಬೆಳಗೆರೆ ಅವರನ್ನು ನೋಡಲು ಹೋಗಲು ಆಗಲಿಲ್ಲ. ೨೦೦೮ ಇಸವಿಯಲ್ಲಿ, ನನ್ನ ಹಿರಿಯ ಮಗನನ್ನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇರಿಸಲು ಬೇಕಾದ  ಹಣವನ್ನು ಜೋಡಿಸಲು ಪರದಾಡುತ್ತಿದ್ದೆ. ಆ ಸಮಯದಲ್ಲಿ ರವಿ ಬೆಳಗೆರೆ ಅವರು ತನ್ನ ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ನನಗೆ ಖುದ್ದಾಗಿ ಕೊಡಲು, ನನ್ನನ್ನು ಅವರ ಪತ್ರಿಕಾ ಕಚೇರಿಗೆ ಕರೆತರಲು ನನ್ನ ಸಹೋದ್ಯೋಗಿಗೆ ಹೇಳ್ತಾರೆ. ಮರುದಿನ ಬೆಳಿಗ್ಗೆ ನಾನು ರವಿಬೆಳಗೆರೆ ಕಚ...