Posts

ಆರು ದಶಕಗಳ ಹಿಂದೆ ಕಣ್ಮರೆಯಾದ ನನ್ನ ತಮ್ಮನ ನೆನಪು

Image
ನನಗೆ ಇನ್ನೊಬ್ಬ ತಮ್ಮ ಇದ್ದ. ಅವನ ಹೆಸರು ಶ್ರೀನಿವಾಸ ರಾವ್. ನಾನು ಸೀನೂ ಎಂದು ಕರಿಯುತ್ತಿದ್ದೆ. ಅವನು ಹುಟ್ಟಿದ್ದು 25-10-1960. ವಿಧಿಯ ಆಟ ಹೇಗಿತ್ತೆಂದರೆ, 3-10-1962 ದಿನಾಂಕ ಅವನಿಗೆ ಇನ್ನೂ ಎರಡು ವರ್ಷ ಸಹಾ ತುಂಬಿರಲಿಲ್ಲ,  ಬಟಾಣಿ ತಿನ್ನುತ್ತಿದ್ದಾಗ ಒಂದು ಬಟಾಣಿ ಕಾಳು ಗಂಟಲಿನಲ್ಲಿ ಸಿಕ್ಕಿ ಕೊಂಡು ಕೊನೆ ಉಸಿರು ಬಿಟ್ಟನಂತೆ. ಆಗ ನಮ್ಮ ತಂದೆಯವರು ಸಹಾ ಕಚೇರಿ ಕೆಲಸದ ನಿಮಿತ್ತ ಹತ್ತಿರದ ಒಂದು ಹಳ್ಳಿಗೆ ಹೂಗಿದ್ದರಂತೆ.  ಮನೆ ಹತ್ತಿರದ ಪ್ರೈಮರಿ ಶಾಲೆ ಮುಂದೆ ಇರುವ ಸಿದ್ದಪ್ಪ ಮಾಸ್ತರರ ಮನೆಯಲ್ಲಿದ್ದ ನನ್ನ,  ನಿನ್ನ ತಮ್ಮ ಸತ್ತು ಹೋಗಿದ್ದಾನೆ, ಮನೆಗೆ ಬಾ ಎಂದು ನಮ್ಮ ಮನೆ ನೌಕರ ನಾಗಪ್ಪ ಕೂಗಿದ್ದು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ.   ಕಂಕುಳಲ್ಲಿ ಹಲಗೆ ಇಟ್ಟುಕೊಂಡು ಮನೆಗೆ ಬಂದಿದ್ದ ದಾರಿ, ನಮ್ಮ ತಾಯಿ ಅಳುತ್ತಿರುವ ಸನ್ನಿವೇಶ ನನಗೆ ಈಗಲೂ ನೆನಪಿದೆ. ನನಗೆ ಆಗ 6 ವರ್ಷ ತುಂಬುವುದಕ್ಕೆ ಇನ್ನೂ 79 ದಿನಾ ಉಳಿದಿತ್ತು. ನನ್ನದು ಸಹಾ ಹುಟ್ಟು, ಸಾವು ಏನೆಂದೇ ಗೊತ್ತಿಲ್ಲದ ವಯಸ್ಸು. ಅಮ್ಮ ಯಾಕೆ ಅಳುತ್ತಿದ್ದಾಳೆ ಎನ್ನುವುದು ಗೊತ್ತಾಗಿರಲಿಲ್ಲ. ಅಮ್ಮನನ್ನು ನೋಡಿ ನಾನು ಸಹಾ ಅತ್ತುಬಿಟ್ಟೆ ಅಷ್ಟೇ. ವಿಪರ್ಯಾಸವೆಂದರೆ, ನನ್ನ ತಮ್ಮನ ಫೋಟೋ ಒಂದೇ ಒಂದು ಸಹಾ ಮನೇಲಿ ಇಲ್ಲಾ. ಆದರೆ, ನನ್ನ ಕಣ್ಣಿನ ಕೆಮೆರಾ ಸೆರೆ ಹಿಡಿದ ಅವನ ಮುದ್ದಿನ ಚಹರೆ ಈಗಲೂ ನನ್ನ ಹೃದಯ ಪಟದ ಮೇಲೆ ...

ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ

Image
  ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ ನಾನು ಕರ್ನಾಟಕ ರಾಜ್ಯದ ಪುಣ್ಯ ಭೂಮಿ ಮೇಲೆ ನೆಲೆಸಿ ೩೯ ವರ್ಷಗಳಾಯಿತು ಎಂದು,  ನಿನ್ನೆಯಷ್ಟೇ ಬ್ಲಾಗ್ ಮೂಲಕ ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡೆ. ನನ್ನ ಬರವಣಿಗೆಯ ಬಗ್ಗೆ ಪ್ರತಿಕ್ರಿಯುಸುತ್ತಾ, ನಾನು ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆಂದು ವಿವರಿಸಬೇಕೆಂದು, ನನ್ನ ಸೋದರ ಸಮಾನರು, ನನ್ನ ಇಲಾಖೆಯ ಅಧಿಕಾರಿಯೂ ಆಗಿದ್ದ, ಶ್ರೀ ಭರತ್ ರಾಜ್ ಅವರು ಕೇಳಿದರು.  ೨೬-೫-೧೯೮೨ ದಿನಾಂಕ ನಾನು ದಾವಣಗೆರೆಗೆ ಬಂದಮೇಲೆ, ಬಿಡುವಿನ ವೇಳೆಯಲ್ಲಿ ಕಾಲಕಳೆಯಲು  ಕನ್ನಡ ದಿನಪತ್ರಿಕೆಗಳು ಓದಲು ಶುರು ಮಾಡಿದೆ. ಕಾಲಕ್ರಮೇಣ, ಅದು ವಾರಪತ್ರಿಕೆ, ಮಾಸಪತ್ರಿಕೆ ಓದುವ ಹವ್ಯಾಸವಾಗಿ ಪರಿವರ್ತಿಸಿತು. ಕನ್ನಡ ಚೆನ್ನಾಗಿ ಓದಲು ಕಲಿತಿದ್ದೆ. ಆದರೆ, ಕನ್ನಡ ಬರೆಯಲು ಪ್ರಯತ್ನ ಮಾಡಿರಲಿಲ್ಲ.  ಅವಕಾಶ ಒದಗಿ ಬಂದಿರಲಿಲ್ಲ. ಹೀಗಿರುವಾಗ,೧೯೮೫ ಮೇ ತಿಂಗಳ ತುಷಾರ ಮಾಸ ಪತ್ರಿಕೆ ಯಲ್ಲಿ, ಶ್ರೀಮತಿ ಅನಸೂಯ ಕಡಕೋಳ ಅವರು ಬರೆದ ಮುಟ್ಟು ಎನ್ನುವ ಕಥೆ ಮುದ್ರಿತ ವಾಗಿತ್ತು. ಆ ಕಥೆ, ಯಾವುದೋ  ಕುಗ್ರಾಮದಲ್ಲಿ ನಡೆದಿರುವ ಒಂದು ನೈಜ ಘಟನೆ ಆಧಾರಿತ ಎಂದು ಹೇಳಲಾಗಿತ್ತು. ಆ ಕಥೆಯಲ್ಲಿ ಹೇಳಿರುವ ಕೆಲವು ಘಟನೆಗಳು, ಅಭೂತ ಕಲ್ಪನೆ ಆಗಿರಬಹುದು ಎಂದು ನನಗೆ ಅನಿಸಿತ್ತು. ಈ ವಿಷಯವಾಗಿ, ನನ್ನ ಸಹೋದ್ಯೋಗಿ ಶ್ರೀ ಕಣಜನಹಳ್ಳಿ ಚಂದ್ರಶೇಖರ್ ಅವರ ಜೊತೆ ಚರ್ಚೆ ಮಾಡುವಾಗ, ನನ್ನ ಅನಿಸಿಕೆಯನ್ನು, ಪ್ರತಿಕ್ರಿಯ...

ಕರುನಾಡ ತಾಯಿ ಸದಾ ಚಿನ್ಮಯಿ. ಈ ಪುಣ್ಯಭೂಮಿ ನನ್ನ ದೇವಾಲಯ

Image
  ನಾನು ಹುಟ್ಟಿದ್ದು ಆಂಧ್ರಪ್ರದೇಶದ, ಅನಂತಪುರ ಜಿಲ್ಲೆಯ, ಗುತ್ತಿ ತಾಲೂಕಿನ, ರಾಮರಾಜುಪಲ್ಲಿ ಎಂಬುವ ಗ್ರಾಮದಲ್ಲಿ. ೨೦ ವರ್ಷದ ವಯಸ್ಸಿನ ವರೆಗೂ ಬೆಳೆದಿದ್ದು ಗುತ್ತಿ ಯಲ್ಲಿ. ತದನಂತರ ಸೇರಿದ್ದು ಅನಂತಪುರ ಪಟ್ಟಣ. ಆದಕಾರಣ, ಓದಿದ್ದು ತೆಲುಗು ಮಾಧ್ಯಮ ದಲ್ಲಿ. ಅವು,  ಶೇಕ್ಸ್ಪಿಯರ್ ಬರೆದ ಪದ್ಯಗಳು ಸಹಾ ತೆಲುಗು ಭಾಷೆಯಲ್ಲಿ ಹೇಳಿಕೊಡುವ ದಿನಗಳು.  ನಾನು ಹುಟ್ಟಿದ್ದು, ೨೫ ವರ್ಷಗಳ ವಯಸ್ಸಿನ ವರೆಗೂ ಬೆಳೆದಿದ್ದು ಆಂಧ್ರಪ್ರದೇಶ ದಲ್ಲಿ ಆದರೂ ಸಹಾ, ನನ್ನ ಮಾತೃಭಾಷೆ ಕನ್ನಡ ಆಗಿದ್ದರಿಂದ, ಕನ್ನಡ ಮಾತನಾಡಲು ಬರುತ್ತಿತ್ತು. ಬರೆಯಲು ಗೊತ್ತಿರಲಿಲ್ಲ. ನನ್ನ ತಂದೆಯ ಪೂರ್ವಜರು ಕರ್ಣಾಟಕ ರಾಜ್ಯದ ಹೂವಿನಹಡಗಲಿಗೆ ಸೇರಿದವರು. ನೂರಾರು ವರ್ಷಗಳ ಹಿಂದೆ ಆಂಧ್ರಪ್ರದೇಶಕ್ಕೆ ವಲಸೆ ಹೋದರಂತೆ. ನನ್ನ ತಾಯಿ ಕರ್ಣಾಟಕ ರಾಜ್ಯದ ಕೋಲಾರ ಜಿಲ್ಲೆಯ, ಗೌರಿಬಿದನೂರು ತಾಲೂಕಿನ, ಹುಣಸೇನಹಳ್ಳಿ ಗ್ರಾಮಕ್ಕೆ ಸೇರಿದವರು. ೧೯೮೦ ಇಸವಿಯಲ್ಲಿ, ಕೇಂದ್ರ ಸರ್ಕಾರದ, ಸ್ಟಾಪ್ ಸೆಲೆಕ್ಷನ್ ಕಮೀಶನ್ ಸ್ಪರ್ಥಾ ಪರೀಕ್ಷೆ ಬರೆಯಲು, ಬೆಂಗಳೂರು ನಗರವನ್ನು ವೀಕ್ಷಿಸಲು, ಬೆಂಗಳೂರನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿದೆ. ಅದು ನನ್ನ ಜೀವನದ ಮೊದಲ ಸ್ಪರ್ಥಾ ಪರೀಕ್ಷೆ ಆಗಿತ್ತು. ನಾನು ಪರೀಕ್ಷೆ ಬರೆದಿದ್ದು ವಿಧಾನಸೌಧ ಬಾಂಕೆಟ್ ಹಾಲಿನಲ್ಲಿ. ನನ್ನ ಈ ಮೊದಲನೇ ಪರೀಕ್ಷೆಯಲ್ಲೇ ತೇರ್ಗಡೆಯಾಗಿ ೧೯೮೨ ಇಸವಿಯಲ್ಲಿ ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿತು. ನ...

ತಾಯಿಯ ಮಡಿಲು

Image
       ತಾಯಿಯ ಮಡಿಲು ನನ್ನ ತಾಯಿ ನನ್ನನ್ನು ಈ ಜಗತ್ತಿಗೆ ಪರಿಚಯಿಸಿ 23,515 ದಿನಗಳಾಗಿವೆ ನಾನು ಹಸಿ ಕಂದಾಗಿ ನನ್ನ ತಾಯಿಯ ಮಡಿಲಲ್ಲಿ ಮಲಗಿದ ದಿನಗಳು ನನಗೆ ನೆನಪಿಲ್ಲ. ಆದರೆ, ಕಳಾಶಾಲೆಯಲ್ಲಿ  ಓದುವಾಗಲೂ ಸಹಾ, ಒಂದು ದಿನ ನನ್ನ ತಾಯಿಯ ಮಡಿಲಲ್ಲಿ ಮಲಗಿದ ಮಧುರ ಕ್ಷಣಗಳು ನನ್ನ ಮನದಂಗಳದಲ್ಲಿ ಯಾವಾಗಲೂ ಹಚ್ಚಹಸಿರಾಗಿ ಉಳಿದಿರುತ್ತವೆ. ಆ ಮಧುರ ಕ್ಷಣಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.  ನನ್ನ ಕಿರಿಯ ತಂಗಿ ಹುಟ್ಟಿದ್ದು 11-12-1971. ಆಗ ನಾವು ವಾಸಮಾಡುತ್ತಿದ್ದು ಆಂಧ್ರಪ್ರದೇಶದ, ಅನಂತಪುರ ಜಿಲ್ಲೆಯ, ಗುತ್ತಿ ಎನ್ನುವ ಊರಿನಲ್ಲಿ. ಗುತ್ತಿ ಯಲ್ಲಿ  ಕಳಾಶಾಲೆ ಇಲ್ಲದಿರುವ ಕಾರಣ, 30 ಕಿಲೋ ಮೀಟರ್ ದೂರದಲ್ಲಿರುವ ಗುಂತಕಲ್ ಎನ್ನುವ ಊರಿನಲ್ಲಿರುವ ಪ್ರಭುತ್ವ ಕಳಾಶಾಲೆಯಲ್ಲಿ ಇಂಟರ್ಮೀಡಿಯೇಟ್ ಓದುತ್ತಿದ್ದೆ. ಪ್ರತಿ ದಿನವೂ ರೈಲಿನಲ್ಲಿ ಓಡಾಡುತ್ತಿದ್ದೆ. ಆ ಸಮಯದಲ್ಲಿ,  18-12-1971 ದಿನಾಂಕ, ಕಳಾಶಾಲೆಯಲ್ಲಿದ್ದಾಗಲೇ, ಜ್ವರ ಬಂದಿತ್ತು. ಮೈ ಸುಡುತ್ತಿತ್ತು. ಸಂಜೆ ಗುಂತಕಲ್ ನಿಂದ ಗುತ್ತಿಗೆ ಯಥಾಪ್ರಕಾರ 9 ಮೆಯಿಲ್ ರೈಲಿನಲ್ಲಿ ಬಂದೆ. ಮನೆ ತಲುಪಿದಾಗ ಸುಮಾರು 7-30 ಘಂಟೆ ಆಗಿತ್ತು. ನನ್ನ ತಾಯಿ 8 ದಿನದ ಬಾಣಂತಿ. ಆಗಿನದಿನಗಳಲ್ಲಿ ತುಂಬಾ ಮಡಿ ಆಚಾರ ಇರ್ತಿತ್ತು. ನಾನು ಮನೆಗೆ ಬಂದವನು, ಸೀದಾ ನನ್ನ ತಾಯಿ ಇರುವ ಕೋಣೆ ನುಗ್ಗಿದೆ. ನನ್ನ ತಾಯಿ ತೊಟ್ಟಿಲು ತೂಗುತ್ತಾ ಪದ್ಮಾಸನ ಹ...

ದಶರಥ ಸುಪುತ್ರಾ ರಾಮಾ

Image
ದಶರಥ ಸುಪುತ್ರಾ ರಾಮಾ   ಮಾನವ ಸಂಬಂಧಗಳಾದ, ತಂದೆ, ತಾಯಿ, ಮಕ್ಕಳು, ಅಣ್ಣತಮ್ಮಂದಿರ ಅನ್ಯೋನ್ಯತೆ, ಪ್ರೀತಿ ಪ್ರೇಮ ಬಗ್ಗೆ ಸರಿಯಾದ ನಿರ್ವಚನ ಬೇಕಾದರೆ, ರಾಮಾಯಣ ಮಹಾಕಾವ್ಯವನ್ನು ಓದಬೇಕು. ದಶರಥ,  ಶ್ರೀ ರಾಮ ಮತ್ತು ಸಹೋದರ ಪಾತ್ರಗಳು, ನನಗೆ ಜೀವನದಲ್ಲಿ ಮಾದರಿ ಆಗಿರುತ್ತವೆ. ತಂದೆ ಎಂದರೆ,  ಮಗ ಎಂದರೆ, ಅಣ್ಣತಮ್ಮಂದಿರಂದರೆ ಹೇಗಿರಬೇಕು ಅಂತ ತೋರಿಸಿಕೊಟ್ಟ ಮಹಾನುಭಾವರು. ದಶರಥನು ಶ್ರೀರಾಮನ ಮೇಲೆ ಇಟ್ಟುಕೊಂಡಿರುವ ಪ್ರೀತಿಗಿಂತ ದೊಡ್ಡದು ನಮ್ಮ ತಂದೆಯವರು ನನ್ನ ಮೇಲೆ ಇಟ್ಟುಕೊಂಡಿರುವ ಪ್ರೀತಿ. ನಮ್ಮಿಬ್ಬರ ಪ್ರೀತಿ ಬಗ್ಗೆ ಹೇಳಬೇಕೆಂದರೆ, ರಾಮಾಯಣದ ತರಾ ‌ಒಂದು ಮಧುರ ಕಾವ್ಯ ಆಗಬಹುದು. ಕೇಂದ್ರ ಸರ್ಕಾರ ನೌಕರಿ ನಿಮಿತ್ತ, ನಾನು ಅನಂತಪುರ ದಿಂದ  ದಾವಣಗೆರೆಗೆ ಹೊರಟಿದ್ದು ೨೬-೫-೧೯೮೨. ನನಗೆ ಬೀಳ್ಕೊಡುವ ಸಲುವಾಗಿ, ನಮ್ಮ ತಂದೆ, ಅಜ್ಜಿ, ಮೂರೂ ಜನ ತಮ್ಮಂದಿರು, ಇಬ್ಬರೂ ತಂಗಿಯರು, ಬಸ್ ನಿಲ್ದಾಣಕ್ಕೆ ಬಂದಿದ್ದರು.  ನನಗೆ ಆಗ ೨೫ ವರ್ಷ ವಯಸ್ಸು. ಸಾಂಪ್ರದಾಯಿಕ ವಾತಾವರಣದಿಂದ ವಿಭಿನ್ನ ಶೈಲಿಯ ಜೀವನಕ್ಕೆ ಪಾದಾರ್ಪಣೆ. ಪಂಜರದಲ್ಲಿ ಜೋಪಾನವಾಗಿ ಬೆಳೆದಿರುವ ಗಿಣಿಗೆ ಒಮ್ಮೆಲೇ ಮೈಚಳಿ ಬಿಟ್ಟ ಭಾವನೆ. ಬಿಸಿಯ ರಕ್ತ. ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದ್ದ ಹುಮ್ಮಸ್ಸಿನಲ್ಲಿ, ದಾವಣಗೆರೆಗೆ ನಾನು ಹೊರಡುವಾಗ, ಶ್ರೀ ರಾಮ ದೂರ ವಾದಾಗ ದಶರಥ ಮಹಾರಾಜನು ಅನುಭವಿಸಿದ ನೋವಿಗಿಂತಲೂ, ಹೆಚ್ಚು ನೋವು ನಮ್ಮ ತಂದೆಯವರ...

ಮೇ ತಿಂಗಳು 1ನೇ ತಾರೀಖು, ಸೂರ್ಯೋದಯ

Image
              ಮೇ ತಿಂಗಳು 1ನೇ ತಾರೀಖು ನನ್ನ ಜೀವನದಲ್ಲಿ ಮರೆಯಲಾಗದ ದಿನ. ಜ್ವರ ಬರುತ್ತಿರುವ ನನ್ನ ತಾಯಿಯನ್ನು ನೋಡಲು ಮನಸ್ಸಾಗಿ, ಏಪ್ರಿಲ್ 30, 2015 ಸಂಜೆ  ಮಂಗಳೂರಿನಿಂದ ಅನಂತಪುರಕ್ಕೆ  ಹೊರಟೆ.  ನಾನು ಮಗತನಿದ್ದೆಯಲ್ಲಿದ್ದೆ. ಹಠಾತ್ತನೆ, ನನ್ನ ತಾಯಿ ನನ್ನ ಕೆನ್ನೆಯನ್ನು ತನ್ನ ಕೈಯಲ್ಲಿ ಸವರಿ ವೆಂಕಟೂ ಎಂದು ಕರೆದಹಾಗೆ ಅನಿಸಿತು. ಎಚ್ಚರವಾಗಿ ನೋಡಿದರೆ ಮೇ 1,2015 ಬೆಳಿಗ್ಗೆ 6-30 ಘಂಟೆ ಸಮಯವಾಗಿತ್ತು.ಬಸ್ಸು ಬಳ್ಳಾರಿ ಹೊರವಲಯದಲ್ಲಿ ಬರುತ್ತಿತ್ತು. 7ಘಂಟೆಗೆ ಬಸ್ಸು ಬಳ್ಳಾರಿ ನಿಲ್ದಾಣ ಸೇರುತ್ತಿತ್ತು, ನನ್ನ ಕೊನೆಯ ತಮ್ಮನಿಂದ ಫೋನ್ ಬಂತು. ಎಲ್ಲಿದ್ದೀಯ ಅಣ್ಣಾ ಎಂದು. ಅಮ್ಮನ ನೋಡುವ ಮನಸ್ಸಾಯಿತು, ಊರಿಗೆ ಬರುತ್ತಿದ್ದೇನೆ ಎಂದು ಹೇಳಿದೆ. ಅಮ್ಮ ಈಗಷ್ಟೇ 6-30 ಘಂಟೆಗೆ ಮರಣ ಹೊಂದಿದ್ದಾಳೆ ಎಂದು ತಮ್ಮ ಹೇಳಿದ. ಅಂದರೆ, ನನ್ನ ತಾಯಿ ಇಹಲೋಕ ತ್ಯಜಿಸುವ ವೇಳೆಯಲ್ಲಿ ಸಹಾ, ನನ್ನ ಮಾತಾಡಿಸಿ, ಕೈ ಯಿಂದ ಕೆನ್ನೆ ಸವರಿ ಹೋಗಿದ್ದಾರೆ😢😢

ಮಾವಿನ ಉಪ್ಪಿನಕಾಯಿ ತಯಾರಿಸುವ ವಿಧಾನ

Image
  ಮಾವಿನ ಕಾಯಿ.  - 15 ಸಾಸಿವೆ            -200 ಗ್ರಾಂ ಮೆಂತ್ಯ.           - 3 ಸ್ಪೂನ್ ಉಪ್ಪು.           -200 ಗ್ರಾಂ ಮೆಣಸಿನ ಪುಡಿ-200 ಗ್ರಾಂ ಎಳ್ಳೆಣ್ಣೆ.          1 ಲೀಟರ್ ಮೊದಲು, ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು, ಒಣ ಬಟ್ಟೆಯಿಂದ ಒರೆಸಿ, ಹೋಳು ಮಾಡಿಕೊಳ್ಳಬೇಕು.  ಸಾಸಿವೆ ಮತ್ತು ಮೆಂತ್ಯನ್ನು ಬಾಣಲೆಯಲ್ಲಿ (ಎಣ್ಣೆ ರಹಿತ) ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.  ಮಾವಿನ ಕಾಯಿ ಹೋಳನ್ನು ಪಾತ್ರೆಯಲ್ಲಿ ಹಾಕಿ, ಸಾಸಿವೆ ಮೆಂತ್ಯ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಎಳ್ಳೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದಕ್ಕೆ ನೀರು ತಗಿಲಸಬಾರದು. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಚೆನ್ನಾಗಿ ಕಲಿಸುತ್ತಾ, ಎರಡು ದಿನ ಅದೇ ಪಾತ್ರೆಯಲ್ಲಿ ಇಟ್ಟು, ರುಚಿ ನೋಡಿದಾಗ, ಏನಾದರೂ ಕಡಿಮೆ ಅನಿಸಿದರೆ, ಸೇರಿಸಿ,  ರುಚಿಯನ್ನು ಸರಿಪಡಿಸಿ, ಉಪ್ಪಿನಕಾಯಿಯನ್ನು ಬೇರೆ ಗಾಜಿನ ಬಾಟಲಿಯಲ್ಲಿ ಅಥವಾ, ಜಾಡಿಯಲ್ಲಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಇದು ನೀರಿನ ಸಂಪರ್ಕಕ್ಕೆ ಬರಬಾರದು. ಉಪ್ಪಿನಕಾಯಿ ವರ್ಷಪೂರ್ತಿ ಕೆಡುವುದಿಲ್ಲ.