ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ
ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ ನಾನು ಕರ್ನಾಟಕ ರಾಜ್ಯದ ಪುಣ್ಯ ಭೂಮಿ ಮೇಲೆ ನೆಲೆಸಿ ೩೯ ವರ್ಷಗಳಾಯಿತು ಎಂದು, ನಿನ್ನೆಯಷ್ಟೇ ಬ್ಲಾಗ್ ಮೂಲಕ ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡೆ. ನನ್ನ ಬರವಣಿಗೆಯ ಬಗ್ಗೆ ಪ್ರತಿಕ್ರಿಯುಸುತ್ತಾ, ನಾನು ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆಂದು ವಿವರಿಸಬೇಕೆಂದು, ನನ್ನ ಸೋದರ ಸಮಾನರು, ನನ್ನ ಇಲಾಖೆಯ ಅಧಿಕಾರಿಯೂ ಆಗಿದ್ದ, ಶ್ರೀ ಭರತ್ ರಾಜ್ ಅವರು ಕೇಳಿದರು. ೨೬-೫-೧೯೮೨ ದಿನಾಂಕ ನಾನು ದಾವಣಗೆರೆಗೆ ಬಂದಮೇಲೆ, ಬಿಡುವಿನ ವೇಳೆಯಲ್ಲಿ ಕಾಲಕಳೆಯಲು ಕನ್ನಡ ದಿನಪತ್ರಿಕೆಗಳು ಓದಲು ಶುರು ಮಾಡಿದೆ. ಕಾಲಕ್ರಮೇಣ, ಅದು ವಾರಪತ್ರಿಕೆ, ಮಾಸಪತ್ರಿಕೆ ಓದುವ ಹವ್ಯಾಸವಾಗಿ ಪರಿವರ್ತಿಸಿತು. ಕನ್ನಡ ಚೆನ್ನಾಗಿ ಓದಲು ಕಲಿತಿದ್ದೆ. ಆದರೆ, ಕನ್ನಡ ಬರೆಯಲು ಪ್ರಯತ್ನ ಮಾಡಿರಲಿಲ್ಲ. ಅವಕಾಶ ಒದಗಿ ಬಂದಿರಲಿಲ್ಲ. ಹೀಗಿರುವಾಗ,೧೯೮೫ ಮೇ ತಿಂಗಳ ತುಷಾರ ಮಾಸ ಪತ್ರಿಕೆ ಯಲ್ಲಿ, ಶ್ರೀಮತಿ ಅನಸೂಯ ಕಡಕೋಳ ಅವರು ಬರೆದ ಮುಟ್ಟು ಎನ್ನುವ ಕಥೆ ಮುದ್ರಿತ ವಾಗಿತ್ತು. ಆ ಕಥೆ, ಯಾವುದೋ ಕುಗ್ರಾಮದಲ್ಲಿ ನಡೆದಿರುವ ಒಂದು ನೈಜ ಘಟನೆ ಆಧಾರಿತ ಎಂದು ಹೇಳಲಾಗಿತ್ತು. ಆ ಕಥೆಯಲ್ಲಿ ಹೇಳಿರುವ ಕೆಲವು ಘಟನೆಗಳು, ಅಭೂತ ಕಲ್ಪನೆ ಆಗಿರಬಹುದು ಎಂದು ನನಗೆ ಅನಿಸಿತ್ತು. ಈ ವಿಷಯವಾಗಿ, ನನ್ನ ಸಹೋದ್ಯೋಗಿ ಶ್ರೀ ಕಣಜನಹಳ್ಳಿ ಚಂದ್ರಶೇಖರ್ ಅವರ ಜೊತೆ ಚರ್ಚೆ ಮಾಡುವಾಗ, ನನ್ನ ಅನಿಸಿಕೆಯನ್ನು, ಪ್ರತಿಕ್ರಿಯ...