ಮಾವಿನ ಉಪ್ಪಿನಕಾಯಿ ತಯಾರಿಸುವ ವಿಧಾನ
ಮಾವಿನ ಕಾಯಿ. - 15
ಸಾಸಿವೆ -200 ಗ್ರಾಂ
ಮೆಂತ್ಯ. - 3 ಸ್ಪೂನ್
ಉಪ್ಪು. -200 ಗ್ರಾಂ
ಮೆಣಸಿನ ಪುಡಿ-200 ಗ್ರಾಂ
ಎಳ್ಳೆಣ್ಣೆ. 1 ಲೀಟರ್
ಮೊದಲು, ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು, ಒಣ ಬಟ್ಟೆಯಿಂದ ಒರೆಸಿ, ಹೋಳು ಮಾಡಿಕೊಳ್ಳಬೇಕು.
ಸಾಸಿವೆ ಮತ್ತು ಮೆಂತ್ಯನ್ನು ಬಾಣಲೆಯಲ್ಲಿ (ಎಣ್ಣೆ ರಹಿತ) ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.
ಮಾವಿನ ಕಾಯಿ ಹೋಳನ್ನು ಪಾತ್ರೆಯಲ್ಲಿ ಹಾಕಿ, ಸಾಸಿವೆ ಮೆಂತ್ಯ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಎಳ್ಳೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದಕ್ಕೆ ನೀರು ತಗಿಲಸಬಾರದು. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಚೆನ್ನಾಗಿ ಕಲಿಸುತ್ತಾ, ಎರಡು ದಿನ ಅದೇ ಪಾತ್ರೆಯಲ್ಲಿ ಇಟ್ಟು, ರುಚಿ ನೋಡಿದಾಗ, ಏನಾದರೂ ಕಡಿಮೆ ಅನಿಸಿದರೆ, ಸೇರಿಸಿ, ರುಚಿಯನ್ನು ಸರಿಪಡಿಸಿ, ಉಪ್ಪಿನಕಾಯಿಯನ್ನು ಬೇರೆ ಗಾಜಿನ ಬಾಟಲಿಯಲ್ಲಿ ಅಥವಾ, ಜಾಡಿಯಲ್ಲಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಇದು ನೀರಿನ ಸಂಪರ್ಕಕ್ಕೆ ಬರಬಾರದು. ಉಪ್ಪಿನಕಾಯಿ ವರ್ಷಪೂರ್ತಿ ಕೆಡುವುದಿಲ್ಲ.
Comments
Post a Comment