ಮೇ ತಿಂಗಳು 1ನೇ ತಾರೀಖು, ಸೂರ್ಯೋದಯ

 

         


ಮೇ ತಿಂಗಳು 1ನೇ ತಾರೀಖು ನನ್ನ ಜೀವನದಲ್ಲಿ ಮರೆಯಲಾಗದ ದಿನ. ಜ್ವರ ಬರುತ್ತಿರುವ ನನ್ನ ತಾಯಿಯನ್ನು ನೋಡಲು ಮನಸ್ಸಾಗಿ, ಏಪ್ರಿಲ್ 30, 2015 ಸಂಜೆ  ಮಂಗಳೂರಿನಿಂದ ಅನಂತಪುರಕ್ಕೆ  ಹೊರಟೆ.  ನಾನು ಮಗತನಿದ್ದೆಯಲ್ಲಿದ್ದೆ. ಹಠಾತ್ತನೆ, ನನ್ನ ತಾಯಿ ನನ್ನ ಕೆನ್ನೆಯನ್ನು ತನ್ನ ಕೈಯಲ್ಲಿ ಸವರಿ ವೆಂಕಟೂ ಎಂದು ಕರೆದಹಾಗೆ ಅನಿಸಿತು. ಎಚ್ಚರವಾಗಿ ನೋಡಿದರೆ ಮೇ 1,2015 ಬೆಳಿಗ್ಗೆ 6-30 ಘಂಟೆ ಸಮಯವಾಗಿತ್ತು.ಬಸ್ಸು ಬಳ್ಳಾರಿ ಹೊರವಲಯದಲ್ಲಿ ಬರುತ್ತಿತ್ತು. 7ಘಂಟೆಗೆ ಬಸ್ಸು ಬಳ್ಳಾರಿ ನಿಲ್ದಾಣ ಸೇರುತ್ತಿತ್ತು, ನನ್ನ ಕೊನೆಯ ತಮ್ಮನಿಂದ ಫೋನ್ ಬಂತು. ಎಲ್ಲಿದ್ದೀಯ ಅಣ್ಣಾ ಎಂದು. ಅಮ್ಮನ ನೋಡುವ ಮನಸ್ಸಾಯಿತು, ಊರಿಗೆ ಬರುತ್ತಿದ್ದೇನೆ ಎಂದು ಹೇಳಿದೆ. ಅಮ್ಮ ಈಗಷ್ಟೇ 6-30 ಘಂಟೆಗೆ ಮರಣ ಹೊಂದಿದ್ದಾಳೆ ಎಂದು ತಮ್ಮ ಹೇಳಿದ. ಅಂದರೆ, ನನ್ನ ತಾಯಿ ಇಹಲೋಕ ತ್ಯಜಿಸುವ ವೇಳೆಯಲ್ಲಿ ಸಹಾ, ನನ್ನ ಮಾತಾಡಿಸಿ, ಕೈ ಯಿಂದ ಕೆನ್ನೆ ಸವರಿ ಹೋಗಿದ್ದಾರೆ😢😢

Comments

Popular posts from this blog

ಆರು ದಶಕಗಳ ಹಿಂದೆ ಕಣ್ಮರೆಯಾದ ನನ್ನ ತಮ್ಮನ ನೆನಪು

ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ

ಮಾವಿನ ಉಪ್ಪಿನಕಾಯಿ ತಯಾರಿಸುವ ವಿಧಾನ