ತಾಯಿಯ ಮಡಿಲು

 

    


ತಾಯಿಯ ಮಡಿಲು


ನನ್ನ ತಾಯಿ ನನ್ನನ್ನು ಈ ಜಗತ್ತಿಗೆ ಪರಿಚಯಿಸಿ 23,515 ದಿನಗಳಾಗಿವೆ ನಾನು ಹಸಿ ಕಂದಾಗಿ ನನ್ನ ತಾಯಿಯ ಮಡಿಲಲ್ಲಿ ಮಲಗಿದ ದಿನಗಳು ನನಗೆ ನೆನಪಿಲ್ಲ. ಆದರೆ, ಕಳಾಶಾಲೆಯಲ್ಲಿ  ಓದುವಾಗಲೂ ಸಹಾ, ಒಂದು ದಿನ ನನ್ನ ತಾಯಿಯ ಮಡಿಲಲ್ಲಿ ಮಲಗಿದ ಮಧುರ ಕ್ಷಣಗಳು ನನ್ನ ಮನದಂಗಳದಲ್ಲಿ ಯಾವಾಗಲೂ ಹಚ್ಚಹಸಿರಾಗಿ ಉಳಿದಿರುತ್ತವೆ. ಆ ಮಧುರ ಕ್ಷಣಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 


ನನ್ನ ಕಿರಿಯ ತಂಗಿ ಹುಟ್ಟಿದ್ದು 11-12-1971. ಆಗ ನಾವು ವಾಸಮಾಡುತ್ತಿದ್ದು ಆಂಧ್ರಪ್ರದೇಶದ, ಅನಂತಪುರ ಜಿಲ್ಲೆಯ, ಗುತ್ತಿ ಎನ್ನುವ ಊರಿನಲ್ಲಿ. ಗುತ್ತಿ ಯಲ್ಲಿ  ಕಳಾಶಾಲೆ ಇಲ್ಲದಿರುವ ಕಾರಣ, 30 ಕಿಲೋ ಮೀಟರ್ ದೂರದಲ್ಲಿರುವ ಗುಂತಕಲ್ ಎನ್ನುವ ಊರಿನಲ್ಲಿರುವ ಪ್ರಭುತ್ವ ಕಳಾಶಾಲೆಯಲ್ಲಿ ಇಂಟರ್ಮೀಡಿಯೇಟ್ ಓದುತ್ತಿದ್ದೆ. ಪ್ರತಿ ದಿನವೂ ರೈಲಿನಲ್ಲಿ ಓಡಾಡುತ್ತಿದ್ದೆ. ಆ ಸಮಯದಲ್ಲಿ,  18-12-1971 ದಿನಾಂಕ, ಕಳಾಶಾಲೆಯಲ್ಲಿದ್ದಾಗಲೇ, ಜ್ವರ ಬಂದಿತ್ತು. ಮೈ ಸುಡುತ್ತಿತ್ತು. ಸಂಜೆ ಗುಂತಕಲ್ ನಿಂದ ಗುತ್ತಿಗೆ ಯಥಾಪ್ರಕಾರ 9 ಮೆಯಿಲ್ ರೈಲಿನಲ್ಲಿ ಬಂದೆ. ಮನೆ ತಲುಪಿದಾಗ ಸುಮಾರು 7-30 ಘಂಟೆ ಆಗಿತ್ತು. ನನ್ನ ತಾಯಿ 8 ದಿನದ ಬಾಣಂತಿ. ಆಗಿನದಿನಗಳಲ್ಲಿ ತುಂಬಾ ಮಡಿ ಆಚಾರ ಇರ್ತಿತ್ತು. ನಾನು ಮನೆಗೆ ಬಂದವನು, ಸೀದಾ ನನ್ನ ತಾಯಿ ಇರುವ ಕೋಣೆ ನುಗ್ಗಿದೆ. ನನ್ನ ತಾಯಿ ತೊಟ್ಟಿಲು ತೂಗುತ್ತಾ ಪದ್ಮಾಸನ ಹಾಕಿಕೊಂಡು ಕುಳಿತಿದ್ದಳು. ನನ್ನ ಹೆಗಲಲ್ಲಿದ್ದ ಪುಸ್ತಕ ಸಂಚಿಯನ್ನು ಬಿಸಾಕಿ, ನನ್ನ ತಾಯಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದೆ. ನನ್ನ ತಾಯಿಯ ಕೈಗಳು ನನ್ನ ತಲೆಕೂದಲನ್ನು ಸವರುತ್ತಿದ್ದಾಗ ನನ್ನ ಜ್ವರ ಮಂಗಮಾಯ ಆದಂತೆ ಅನಿಸಿತು. 

********

ಮೇ ತಿಂಗಳು 1ನೇ ತಾರೀಖು ನನ್ನ ಜೀವನದಲ್ಲಿ ಮರೆಯಲಾಗದ ದಿನ. ಜ್ವರ ಬರುತ್ತಿರುವ ನನ್ನ ತಾಯಿಯನ್ನು ನೋಡಲು ಮನಸ್ಸಾಗಿ, 2015 ಏಪ್ರಿಲ್ 30 ಸಂಜೆ  ಮಂಗಳೂರಿನಿಂದ ಅನಂತಪುರಕ್ಕೆ  ಹೊರಟೆ.  ನಾನು ಮಗತನಿದ್ದೆಯಲ್ಲಿದ್ದೆ. ಹಠಾತ್ತನೆ, ನನ್ನ ತಾಯಿ ನನ್ನ ಕೆನ್ನೆಯನ್ನು ತನ್ನ ಕೈಯಲ್ಲಿ ಸವರಿ ವೆಂಕಟೂ ಎಂದು ಕರೆದಹಾಗೆ ಅನಿಸಿತು. ಎಚ್ಚರವಾಗಿ ನೋಡಿದರೆ ಬೆಳಿಗ್ಗೆ 6-30 ಘಂಟೆ ಸಮಯವಾಗಿತ್ತು.

ಬಸ್ಸು ಬಳ್ಳಾರಿ ಹೊರವಲಯದಲ್ಲಿ ಬರುತ್ತಿತ್ತು. 7ಘಂಟೆಗೆ ಬಸ್ಸು ಬಳ್ಳಾರಿ ನಿಲ್ದಾಣ ಸೇರುತ್ತಿದ್ದಾಗ , ನನ್ನ ಕೊನೆಯ ತಮ್ಮನಿಂದ ಫೋನ್ ಬಂತು, ಎಲ್ಲಿದ್ದೀಯ ಅಣ್ಣಾ ಎಂದು. ಅಮ್ಮನ ನೋಡುವ ಮನಸ್ಸಾಯಿತು, ಊರಿಗೆ ಬರುತ್ತಿದ್ದೇನೆ ಎಂದು ಹೇಳಿದೆ.  ಇನ್ನೆಲ್ಲಿ ಅಮ್ಮ,  ಈಗಷ್ಟೇ 6-30 ಘಂಟೆಗೆ ಮರಣ ಹೊಂದಿದ್ದಾಳೆ ಎಂದು ತಮ್ಮ ಹೇಳಿದ. ಅಂದರೆ, ನನ್ನ ತಾಯಿ ಇಹಲೋಕ ತ್ಯಜಿಸುವ ವೇಳೆಯಲ್ಲಿ ಸಹಾ, ನನ್ನ ಮಾತಾಡಿಸಿ, ಕೈ ಯಿಂದ ಕೆನ್ನೆ ಸವರಿ ಹೋಗಿದ್ದಾರೆ😢😢

********

ಈ ಭೂಮಿತಾಯಿಯ ಮಡಿಲಿನಿಂದ, ನನ್ನ ಪ್ರೀತಿಯ ತಾಯಿಯ ಮಡಿಲು ಸೇರಬೇಕೆಂದು ತುಂಬಾ ಸಲ ಅನ್ನಿಸುತ್ತದೆ. 

ಅಲ್ಲಿಯತನಕ, ಪ್ರತಿದಿನವೂ ನನ್ನ ಮಟ್ಟಿಗೆ ಮಾತೃದಿನೋತ್ಸವವೇ 


Comments

  1. It's very hard to digest the absence of mother. Your experiences and memories are really heart touching Pinnappa. 😢😢

    ReplyDelete
  2. Thanks Padma. This is just beginning. Many more to come. Manu, Varu, Sairam, Soumya have encouraged me to have a blogspot. Manu only opened this blogspot.

    I am inclined to recollect all my life experiences, whether good or bad or scary and upload. This is nothing but my Autobiography.

    Whenever, I upload, I'll inform you. I'll start right from my childhood, probably from the age of 5 years.

    ReplyDelete

Post a Comment

Popular posts from this blog

ಆರು ದಶಕಗಳ ಹಿಂದೆ ಕಣ್ಮರೆಯಾದ ನನ್ನ ತಮ್ಮನ ನೆನಪು

ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ

ಮಾವಿನ ಉಪ್ಪಿನಕಾಯಿ ತಯಾರಿಸುವ ವಿಧಾನ