ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ
ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ
ನಾನು ಕರ್ನಾಟಕ ರಾಜ್ಯದ ಪುಣ್ಯ ಭೂಮಿ ಮೇಲೆ ನೆಲೆಸಿ ೩೯ ವರ್ಷಗಳಾಯಿತು ಎಂದು, ನಿನ್ನೆಯಷ್ಟೇ ಬ್ಲಾಗ್ ಮೂಲಕ ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡೆ. ನನ್ನ ಬರವಣಿಗೆಯ ಬಗ್ಗೆ ಪ್ರತಿಕ್ರಿಯುಸುತ್ತಾ, ನಾನು ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆಂದು ವಿವರಿಸಬೇಕೆಂದು, ನನ್ನ ಸೋದರ ಸಮಾನರು, ನನ್ನ ಇಲಾಖೆಯ ಅಧಿಕಾರಿಯೂ ಆಗಿದ್ದ, ಶ್ರೀ ಭರತ್ ರಾಜ್ ಅವರು ಕೇಳಿದರು.
೨೬-೫-೧೯೮೨ ದಿನಾಂಕ ನಾನು ದಾವಣಗೆರೆಗೆ ಬಂದಮೇಲೆ, ಬಿಡುವಿನ ವೇಳೆಯಲ್ಲಿ ಕಾಲಕಳೆಯಲು ಕನ್ನಡ ದಿನಪತ್ರಿಕೆಗಳು ಓದಲು ಶುರು ಮಾಡಿದೆ. ಕಾಲಕ್ರಮೇಣ, ಅದು ವಾರಪತ್ರಿಕೆ, ಮಾಸಪತ್ರಿಕೆ ಓದುವ ಹವ್ಯಾಸವಾಗಿ ಪರಿವರ್ತಿಸಿತು. ಕನ್ನಡ ಚೆನ್ನಾಗಿ ಓದಲು ಕಲಿತಿದ್ದೆ. ಆದರೆ, ಕನ್ನಡ ಬರೆಯಲು ಪ್ರಯತ್ನ ಮಾಡಿರಲಿಲ್ಲ. ಅವಕಾಶ ಒದಗಿ ಬಂದಿರಲಿಲ್ಲ. ಹೀಗಿರುವಾಗ,೧೯೮೫ ಮೇ ತಿಂಗಳ ತುಷಾರ ಮಾಸ ಪತ್ರಿಕೆ ಯಲ್ಲಿ, ಶ್ರೀಮತಿ ಅನಸೂಯ ಕಡಕೋಳ ಅವರು ಬರೆದ ಮುಟ್ಟು ಎನ್ನುವ ಕಥೆ ಮುದ್ರಿತ ವಾಗಿತ್ತು. ಆ ಕಥೆ, ಯಾವುದೋ ಕುಗ್ರಾಮದಲ್ಲಿ ನಡೆದಿರುವ ಒಂದು ನೈಜ ಘಟನೆ ಆಧಾರಿತ ಎಂದು ಹೇಳಲಾಗಿತ್ತು. ಆ ಕಥೆಯಲ್ಲಿ ಹೇಳಿರುವ ಕೆಲವು ಘಟನೆಗಳು, ಅಭೂತ ಕಲ್ಪನೆ ಆಗಿರಬಹುದು ಎಂದು ನನಗೆ ಅನಿಸಿತ್ತು. ಈ ವಿಷಯವಾಗಿ, ನನ್ನ ಸಹೋದ್ಯೋಗಿ ಶ್ರೀ ಕಣಜನಹಳ್ಳಿ ಚಂದ್ರಶೇಖರ್ ಅವರ ಜೊತೆ ಚರ್ಚೆ ಮಾಡುವಾಗ, ನನ್ನ ಅನಿಸಿಕೆಯನ್ನು, ಪ್ರತಿಕ್ರಿಯೆ ಯಾಗಿ ತುಷಾರ ಪತ್ರಿಕೆಗೆ ಕಳುಹಿಸಲು, ಅವನು ಒತ್ತಾಯಿಸಿದ. ಅವನ ಸಹಾಯದಿಂದಲೇ, ಶೋಷಣೆಯ ಧ್ವನಿ ಇಲ್ಲ ಶೀರ್ಷಿಕೆ ಯೊಂದಿಗೆ ನನ್ನ ಪ್ರತಿಕ್ರಿಯೆಯನ್ನು, ತುಷಾರ ಪತ್ರಿಕೆಗೆ ಕಳುಹಿಸಿದೆ. ಅಚ್ಚರಿಯಂತೆ, ನನ್ನ ಪ್ರತಿಕ್ರಿಯೆ ತುಷಾರ ಪತ್ರಿಕೆ ಯಲ್ಲಿ ಮುದ್ರಣಗೊಂಡಿತು. ೫೦ ರೂಪಾಯಿಗಳು ಗೌರವಧನವಾಗಿ ತುಷಾರ ಪತ್ರಿಕೆ ಯಿಂದ ನನಗೆ ಸಿಕ್ಕಿತು. ತುಷಾರ ಪತ್ರಿಕೆ ಯಿಂದ ಬಂದಿರುವ ೧೨-೭-೧೯೮೫ ದಿನಾಂಕದ ಪತ್ರ, ಇದಕ್ಕೆ ಪುರಾವೆಯಾಗಿ ಇಲ್ಲಿ ಲಗತ್ತಿಸಲಾಗಿದೆ. ಅಲ್ಲಿಂದ, ಕನ್ನಡ ಓದುವುದು ಬರೆಯುವುದು ಚೆನ್ನಾಗಿ ಕಲಿತುಕೊಂಡೆ. ಇದೇ ನಾನು ನಡೆದು ಬಂದ ದಾರಿ. Be Roman when you are in Rome ಅನ್ನುವುದನ್ನು ನಾನು ಮನಸಾ ವಾ
ಚಾ ನಂಬುತ್ತೇನೆ ಮತ್ತು ಆಚರಿಸುತ್ತೇನೆ. ಏಕೆಂದರೆ, ಕರ್ನಾಟಕವೇ ನನ್ನ ಕರ್ಮ ಭೂಮಿ ಅಲ್ಲವೇ. ಈಗ ನನ್ನ ಪರಿಸ್ಥಿತಿ ಹೇಗೆ ನಿರ್ಮಾಣವಾಗಿದೆ ಎಂದರೆ, ನಾನು ತೆಲುಗು ಭಾಷೆಗಿಂತಲೂ ಕನ್ನಡ ಭಾಷೆಯಲ್ಲಿ ಸೊಗಸಾಗಿ ಬರೆಯಬಲ್ಲೆ. ಕನ್ನಡವೇ ನನ್ನ ಉಸಿರು ಆಗಿದೆ ❤️

ಅದ್ಭುತ ಪ್ರಯತ್ನ ಮತ್ತು ಸಾಧನೆ ನಾರಾಯಣ ರಾವ್. ಇಷ್ಟೆಲ್ಲಾ ಸಂಗತಿಗಳು ನಿಮ್ಮ ಒಡನಾಟದಲ್ಲಿ ಒಮ್ಮೆಯೂ ತಿಳಿಯಲಿಲ್ಲ. ಬಹುಶಃ ಗುಪ್ತಗಾಮಿನಿಯಾಗಿ ಇದ್ದ ನಿಮ್ಮ ಪ್ರತಿಭೆಯನ್ನು ಗುರುತಿಸಲು ನಾವೆಲ್ಲ ವಿಫಲವಾದೆವು. ನಿವೃತ್ತಿಯವರೆಗೂ ಕಾಯಬೇಕಾಯಿತು. ಈಗ ಅದು ನಿಮ್ಮ ಪ್ರವೃತ್ತಿಯಾಗಿ ಪರಿವರ್ತಿತವಾಗಿರುವುದು ನಿಮ್ಮ ವಿಶ್ರಾಂತ ಜೀವನಕ್ಕೆ, ಕನ್ನಡ ನುಡಿಗೆ ಶೋಭೆಯಾಗಿದೆ. ಈ ಹವ್ಯಾಸ ದಯವಿಟ್ಟು ಮುಂದುವರಿಯಲಿ.
ReplyDeleteಧನ್ಯವಾದಗಳು ಭರತ್ ರಾಜ್ ಸಾರ್. ನಿಮ್ಮ ಹೊಗಳಿಕೆಗೆ ಪಾತ್ರ ನಾದ ನಾನು ನಿಜಕ್ಕೂ ಧನ್ಯಶಾಲಿ. ನಿಮ್ಮ ಅಮೂಲ್ಯವಾದ ಸಮಯವನ್ನು ವೆಚ್ಚ ಮಾಡಿ ನನ್ನ ಬರಹಗಳು ಓದಿ, ನಿಮ್ಮ ಮೆಚ್ಚುಗೆಯನ್ನು ತಿಳಿಸಿದ್ದಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.
ReplyDeleteYour dedication and commitment for your work is highly appreciative Pinnappa 👏👏👏🙏
ReplyDeleteತಮ್ಮ ಮನದಾಳದ ಸವಿನೆನಪುಗಳ ಖಜಾನೆ ಯಿಂದ ನೆನಪುಗಳ ಸರಮಾಲೆ ಹೊರಬಂದಿರುವುದು ಸಂತೋಷದ ವಿಚಾರ. ಒಳಿತಾಗಲಿ ಶುಭವಾಗಲಿ ಮಂಗಳವಾಗಲಿ ಯಶಸ್ಸಾಗಲಿ
ReplyDelete